ಜಿ.ಕೆ ಎಂಟರ್ಪ್ರೈಸಸ್ ಅಡಿಯಲ್ಲಿ ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್. ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಮುಖ್ಯ ರಸ್ತೆ, 18ನೇ ವಾರ್ಡ್, ಕೂಡ್ಲಿಗಿ ಸರ್ಕಲ್, ಹಗರಿಬೊಮ್ಮನಹಳ್ಳಿ – ವಿಜಯನಗರ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಕೇಂದ್ರವನ್ನು ಪ್ರಾರಂಭಿಸಿದ್ದು ಸಂಸ್ಥೆಯ ಪ್ರೋ. ರಾಜೇಂದ್ರ ಪ್ರಸಾದ್ ರವರು ಸ್ಥಳೀಯ ಹಾಗೂ ಸುತ್ತಮುತ್ತಲಿನ ಜನರಿಗೆ ಆಯುರ್ವೇದ ಹಾಗೂ ಆರ್ಗ್ಯಾನಿಕ್ ಉತ್ಪನ್ನಗಳನ್ನು ತಲುಪಿಸಿ ಉತ್ತಮ ಹೆಸರನ್ನು ಗಳಿಸಿರುತ್ತಾರೆ.
ಇವರು ಈ ಹಿಂದೆ ಗುತ್ತಿಗೆ ಔಷಧಿ ಅಧಿಕಾರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಶ್ರೀರಾಮ ರಂಗಪುರ ಬಳ್ಳಾರಿ ವಿವೇಕಾನಂದ ಗಿರಿಜನ ಕಲ್ಯಾಣ ಕರುಣ ಟ್ರಸ್ಟ್ ಬೆಂಗಳೂರು ಹಾಗೂ ಕೇಂದ್ರ ಪುರಸ್ಕೃತ ಯೋಜನೆಯ ಆಯುರ್ವೇದ ಆಸ್ಪತ್ರೆ ಹೂವಿನಹಡಗಲಿಯಲ್ಲಿ ಸೇವೆ ಸಲ್ಲಿಸಿ ಅನುಭವ ಪಡೆದಿರುತ್ತಾರೆ ಹಾಗೂ ಪತಂಜಲಿ ಯೋಗ ಟ್ರೈನರ್ ಆಗಿ ಪ್ರಮಾಣ ಪತ್ರ ಹೊಂದಿದ್ದು ಕೆಲವು ಸಂಸ್ಥೆಗಳ ಆರೋಗ್ಯ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.
ಪ್ರಸ್ತುತ ಗ್ರೀನ್ ಕ್ಯೂರ್ ಎಂಬ ಸ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಖ್ಯಾತ ಕಂಪನಿಗಳ ಆಯುರ್ವೇದ ಔಷಧಿಗಳು ಮತ್ತು ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರವನ್ನು ನಡೆಸುತ್ತಿದ್ದಾರೆ. ಜನರ ಆರೋಗ್ಯ ಸಮಸ್ಯೆಗಳಿಗೆ ಸರಳ ಯೋಗ ಭಂಗಿಗಳನ್ನು ಹಾಗೂ ಮನೆಮದ್ದು ಮಾಹಿತಿಗಳನ್ನು ಕೊಡುತ್ತಾ ಜನಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಹಾಗೂ ಕುಟುಂಬದ ಆರೋಗ್ಯಕ್ಕಾಗಿ ಭೇಟಿ ಕೊಡಿ. ಮೊಬೈಲ್ ಸಂಖ್ಯೆ 948 0360 474