ವಿನೂತನವಾಗಿ ವಿವಾಹ ವಾರ್ಷಿಕೋತ್ಸವದ ಆಚರಣೆ.. ಮಾತೃ ವಂದನೆ ಮತ್ತು ಪಾದಪೂಜೆ

ಶ್ರೀ ಉದಯ ಸುವರ್ಣ ಮರವಂತೆ ಮತ್ತು ಶ್ರೀಮತಿ ನಾಗರತ್ನ ದಂಪತಿಗಳು  ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿನೂತನವಾಗಿ ಅನುಕರಣೀಯವಾಗಿ ಆಚರಿಸಿಕೊಂಡಿದ್ದಾರೆ. 
ಕಾರ್ಯಕ್ರಮದಲ್ಲಿ ತಮ್ಮ ತಾಯಿ ಲಕ್ಷ್ಮಿ ಸುವರ್ಣ ಮರವಂತೆ ಅವರಿಗೆ ಮಾತೃ ವಂದನೆ ಮತ್ತು ಪಾದಪೂಜೆಯನ್ನು ಮಾಡಿ ಮಾನವೀಯ ಮೌಲ್ಯಗಳನ್ನು ಅನುಸರಿಸುವ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಉಳಿಸುವ ಮತ್ತು ಮುಂದುವರಿಸುವ ಅನುಕರಣೀಯ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. 
 ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ವಿನೂತನವಾಗಿ, ಅನುಕರಣೀಯವಾಗಿ ಆಚರಿಸಿಕೊ೦ಡಿರುವ ಶ್ರೀ ಉದಯ ಸುವರ್ಣ ಮರವಂತೆ ಮತ್ತು ಶ್ರೀಮತಿ ನಾಗರತ್ನ ದಂಪತಿಗಳಿಗೆ ವಿವರ ವೇದಿಕೆ ವತಿಯಿಂದ ಹೃತ್ಪೂರ್ವಕ ಶುಭಾಶಯಗಳು

LEAVE A REPLY

Please enter your comment!
Please enter your name here

spot_img

More like this